ಅಸಾಮಾನ್ಯ ವ್ಯಕ್ತಿ ಆಗುವುದು ಹೇಗೆ!!!....
ಒಮ್ಮೆ ಶಿಷ್ಯ ಗುರುವನ್ನು ಕೇಳಿದ,ಗುರುಗಳೇ ಸಾಮಾನ್ಯ ವ್ಯಕ್ತಿಗಳು ಅಸಾಮಾನ್ಯ ವ್ಯಕ್ತಿಗಳಾಗುವ ರಹಸ್ಯವನ್ನು ತಿಳಿಸಿ ಎಂದು.
ಅದಕ್ಕೆ ಗುರುಗಳು ನಗುತ್ತಾ ,
ಇದು ಬಹಳ ಸುಲಭ, ಹೇಗೆಂದರೆ ಸಾಮಾನ್ಯ ವ್ಯಕ್ತಿ ಪದದ ಮುಂದೆ "ಅ"ಸೇರಿಸಿದರಾಯಿತು. ಅದಕ್ಕೆ ಶಿಷ್ಯ ಅಷ್ಟೇನಾ ಗುರುಗಳೇ,
ಗುರುಗಳು ಹೌದು ಎಂದು ಹೇಳಿ,
ಆ "ಅ" ಅಕ್ಷರ ಸೇರಿಸಬೇಕಾದರೇ,
ನೀನು ಯಾವುದೇ ವಿಶೇಷ ಕೆಲಸಗಳನ್ನು ಮಾಡಬೇಕಿಲ್ಲ,
"ಇರುವ ಕೆಲಸವೂ ಮಾಡು ಕಿರುದೆನದೇ ಮನವಿಟ್ಟು",
ಅಂದರೆ ಮಾಡುವ ಪ್ರತಿ ಕೆಲಸವನ್ನು ಗಮನವಿಟ್ಟು ವಿಶೇಷವಾಗಿ ಮಾಡು.
ಇದರ ಜೊತೆಗೆ ನಿನ್ನ ಲ್ಲಿ "ಅ"ರಿವನ್ನು ಜಾಗೃತ ಗೊಳಿಸಿ ಕೋ,
ನೀನು ಯಾರು, ನಿನ್ನ ಶಕ್ತಿ ಸಾಮರ್ಥ್ಯಗಳನ್ನು "ಅ"ನ್ವೇಷಿಸಿ ಕೋ,
ಆಗ
ನಿನ್ನಲ್ಲಿ "ಅಂ"ತ: ಶಕ್ತಿ ಜಾಗೃತ ವಾಗಿ ಮಾಡುವ ಪ್ರತಿ ಸಾಮಾನ್ಯ ಕೆಲಸವೂ ಅಸಾಮಾನ್ಯ ವಾಗಿ,
ಸಾಮಾನ್ಯ ವ್ಯಕ್ತಿಯಾಗಿರುವ ನೀನು ಅಸಾಮಾನ್ಯ ನಾಗುವೆ.
ವಾವ್ಹ್ , ಎಂತಹ ಅದ್ಬುತ ರಹಸ್ಯ ವಿದು.
ಬಂಧುಗಳೇ ಸಾಮಾನ್ಯ ವ್ಯಕ್ತಿಗಳು ಅಸಾಮಾನ್ಯ ಕೆಲಸಗಳನ್ನು ಮಾಡುವುದಿಲ್ಲ, ಬದಲಾಗಿ ಮಾಡುವ ಪ್ರತಿ ಕೆಲಸವನ್ನು ಅಸಮಾನ್ಯ ವಾಗಿ ಮಾಡುತ್ತಾರೆ.
ಲೇಖಕರು
ಡಾ.ಎಂ.ಶಿವಕುಮಾರ್
ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.
ಸಕಾ೯ರಿ ಪ್ರೌಢಶಾಲೆ ಚೀಮಂಗಲ ಶಿಡ್ಲಘಟ್ಟ ತಾಲ್ಲೂಕು